ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿ

ಮೂಲೊದ್ದೇಶ

1. ಕಬ್ಬು ಹಾಗೂ ಸಕ್ಕರೆ ಅಂಶ ಹೊಂದಿರುವ ಬೆಳೆಗಳು ಮತ್ತು ಸಕ್ಕರೆ ಉದ್ದಿಮೆಯ ಉಪ ಉತ್ಪನ್ನಗಳ ಬೇಸಾಯ, ವ್ಯಾಪಾರ/ಉದ್ದಿಮೆಗೆ ಸಂಬಂಧಪಟ್ಟ ಸಂಶೋಧನೆ ಮತ್ತು ಇತರ ವೈಜ್ಞಾನಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು, ಕೈಗೊಳ್ಳುವುದು ಅಥವಾ ಕೈಕೊಳ್ಳಲು ಸಹಾಯ ಮಾಡುವುದು.

2. ಕಬ್ಬು ಮತ್ತು ಇತರ ಸಕ್ಕರೆ ಅಂಶ ಹೊಂದಿರುವ ಬೆಳೆಗಳ ಬೇಸಾಯದ ಸಂಶೋಧನೆ ಕೈಗೊಳ್ಳುವುದು.

3. ವಿವಿಧ ವಾತಾವರಣಕ್ಕೆ ಹೊಂದಿಕೊಳ್ಳುವ ಹಾಗೂ ಉದ್ದಿಮೆಗೆ ಒಳಿತವಿರುವ ಕಬ್ಬಿನ ಸುಧಾರಿತ ತಳಿಗಳ ಆಯ್ಕೆ ಮತ್ತು ಸಂಸ್ಕರಣೆ ಮಾಡುವುದು.

4. ಕಬ್ಬಿನ ನಾಟಿ ಹಾಗೂ ಕುಳೆ ಕಬ್ಬಿನ ಬೆಳೆಯ ಸುಧಾರಣೆ, ನಿರ್ವಹಣೆ ಮತ್ತು ಸಂರಕ್ಷಣೆ ವಿಷಯಗಳ ಮೂಲ ಹಾಗೂ ಪ್ರಾಯೋಗಿಕ ಸಂಶೋಧನೆಗಳನ್ನು ನಡೆಸುವುದು.

5. ಮಣ್ಣಿನ ಆರೋಗ್ಯ ಸುಧಾರಣೆ ಮತ್ತು ಸ್ಥಿರ ಕೃಷಿಗಾಗಿ ಸಮಗ್ರ ಪೋಷಕಾಂಶಗಳ ನಿರ್ವಹಣೆಯ ಕ್ರಮಗಳನ್ನು ಕೈಗೊಳ್ಳಲು ಪೋಷಕಾಂಶವುಳ್ಳ ಸಾವಯವ ವಸ್ತುಗಳು/ಬೆಳೆ ತ್ಯಾಜ್ಯ ಪದಾರ್ಥಗಳನ್ನು ಅಭಿವೃದ್ಧಿಪಡಿಸುವುದು.

6. ಸಮಗ್ರ ಕೀಟ ಹಾಗೂ ರೋಗಗಳ ನಿರ್ವಹಣೆಯ ಪದ್ಧತಿಗಳನ್ನು ಜೈವಿಕ ನಿಯಂತ್ರಣಕ್ಕೆ ಒತ್ತು ನೀಡಿ ಅಭಿವೃದ್ಧಿಪಡಿಸುವುದು.

7. ರೋಗ ರಹಿತ ಸುಧಾರಿತ ಕಬ್ಬಿನ ತಳಿಗಳನ್ನು ಉತ್ಪಾದನೆ ಮಾಡಿ ವಿತರಣೆ ಮಾಡುವುದು.

8. ಕಬ್ಬಿನ ಬೇಸಾಯ ಶಾಸ್ತ್ರದ ಹೆಚ್ಚಿನ ಸಮರ್ಥತೆ, ಉತ್ಪಾದನೆ ವೆಚ್ಚದಲ್ಲಿ ಕಡಿತ ಮತ್ತು ಕೂಲಿ ಆಳುಗಳ ಲಭ್ಯತೆ ಕೊರತೆಯನ್ನು ಹೋಗಲಾಡಿಸಲು ಉಪಕರಣ ಹಾಗೂ ಯಂತ್ರೋಪಕರಣಗಳನ್ನು ತಯಾರಿಸಿ ಮೌಲ್ಯಮಾಪನ ಮಾಡುವುದು.

9. ಕಬ್ಬಿನ ವೈವಿದ್ಧೀಕರಣ ಕೈಗೊಳ್ಳುವುದು ಮತ್ತು ಕಬ್ಬಿನ ಹಾಗೂ ಸಕ್ಕರೆ ಉದ್ದಿಮೆಯ ಮೌಲ್ಯವನ್ನು ಉಪಯೋಗಿಸುವುದು.

10. ಕಟಾವಿನ ಮುನ್ನ ಹಾಗೂ ತದನಂತರ ಆಗುವ ಹಾನಿಗಳನ್ನು ಕಡಿಮೆಗೊಳಿಸುವ ನಿರ್ವಹಣಾ ತಂತ್ರಗಳನ್ನು ಅಭಿವೃದ್ಧಿಪಡಿಸುವುದು.

11. ತಾಂತ್ರಿಕ-ಆರ್ಥಿಕ ಸಮರ್ಥತೆಯನ್ನು ಕಬ್ಬಿನ ಬೇಸಾಯ ಹಾಗೂ ಸಕ್ಕರೆ ಉದ್ದಿಮೆಯಲ್ಲಿ ತರಲು ಪರಿಣಾಮಕಾರಿ ತಾಂತ್ರಿಕತೆ ವರ್ಗಾವಣೆ, ಸಲಹೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗಳನ್ನು ಅಭಿವೃದ್ಧಿಪಡಿಸುವುದು.

12. ಕಬ್ಬು, ಸಕ್ಕರೆ ತಂತ್ರಜ್ಞಾನ, ಸಕ್ಕರೆ ಅಭಿಯಂತರ, ಸಕ್ಕರೆ ಉದ್ದಿಮೆಯ ನಿರ್ವಹಣೆ ಮತ್ತು ಅದಕ್ಕೆ ಸಂಬಂಧಪಟ್ಟ ಇತರ ವಿಷಯಗಳ ತರಬೇತಿ ನೀಡುವುದು ಮತ್ತು ಸಂಸ್ಥೆಯು ಉಚಿತವೆನಿಸಿದ್ದಲ್ಲಿ ಹೊಸ ಕೋರ್ಸಗಳನ್ನು ಸಕ್ಕರೆ ಹಾಗೂ ಅದಕ್ಕೆ ಸಂಬಂಧಿತ ಉದ್ದಿಮೆಯಲ್ಲಿ ನಿರತರಾಗಿರುವ ಜನರಿಗೆ ಪರೀಕ್ಷೆಗಳನ್ನು ನೆರವೇರಿಸಿ ಪದವಿ ಮತ್ತು ಡಿಪ್ಲೋಮಾ ಮತ್ತು ಇತರ ಶೈಕ್ಷಣಿಕ ವೈಲಕ್ಷಣ್ಯಗಳು ಹಾಗೂ ಗೌರವ ಪ್ರಶಸ್ತಿಗಳನ್ನು ನೀಡುವುದು.

13. ಕಬ್ಬಿನ ಅನ್ವಯಿಕ ಸಂಶೋಧನೆಗಳನ್ನು ಸಕ್ಕರೆ ಕಾರ್ಖಾನೆಗಳ ಆವರಣದಲ್ಲಿ ಹಾಗೂ ಸಂಸ್ಥೆಯಲ್ಲಿ ಕೃಷಿ ವಿಶ್ವವಿದ್ಯಾಲಯ ಸಹಯೋಗದೊಂದಿಗೆ ಕೈಗೊಳ್ಳುವುದು.

14. ಅತೀ ವೇಗದಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಮತ್ತು ರೈತರಿಗೆ ಪರಿಣಾಮಕಾರಿ ಮತ್ತು ಉಪಯುಕ್ತವಾದ ವ್ಯವಸ್ಥೆಯನ್ನು ಕಲ್ಪಿಸಿ ಪ್ರತಿ ಎಕರೆ ಇಳುವರಿಯನ್ನು ಹೆಚ್ಚಿಸುವುದು ಮತ್ತು ವೇಗದಲ್ಲಿ ಕಬ್ಬು ಅಭಿವೃದ್ಧಿ ಚಟುವಟಿಕೆಗಳನ್ನು ಕಾರ್ಖಾನೆಯ ಆವರಣದಲ್ಲಿ ಅಭಿವೃದ್ಧಿಪಡಿಸುವ ಯೋಜನೆಯನ್ನು ರೂಪಿಸುವುದು.

15. ಕಬ್ಬಿನ ಹಾಗೂ ಇತರ ಸಕ್ಕರೆ ಅಂಶವುಳ್ಳ ಬೆಳೆಗಳ, ಸಕ್ಕರೆ, ಉಪಪದಾರ್ಥಗಳ ಮತ್ತು ಇವುಗಳಿಂದ ಉತ್ಪಾದನೆಯಾದ ಇತರ ಪದಾರ್ಥಗಳ ವೆಚ್ಚ, ಬೆಲೆ ಮತ್ತು ಮಾರುಕಟ್ಟೆಯ ಅಧ್ಯಯನಕ್ಕೆ ಪ್ರೋತ್ಸಾಹಿಸುವುದು.

16. ಖಂಡಸಾರಿ ಹಾಗೂ ಬೆಲ್ಲದ ತಯಾರಿಕೆಯನ್ನು ಹೆಚ್ಚಿನ ಸಮರ್ಥತೆ, ಹಾನಿ ಕಡಿಮೆಗೊಳಿಸಿ ಮತ್ತು ಉತ್ಪಾದನಾ ವೆಚ್ಚವನ್ನು ಕಡಿಮೆಗೊಳಿಸಿ ಉತ್ಪಾದನೆಯನ್ನು ಹೆಚ್ಚಿಸುವ ಅಧ್ಯಯನ ಪ್ರೋತ್ಸಾಹಿಸುವುದು.

17. ಕಾರ್ಖಾನೆಗಳ ಆವರಣದಲ್ಲಿ ಹೆಚ್ಚಿನ ಇಳುವರಿ ಮತ್ತು ಗುಣಧರ್ಮ ಹೊಂದಿರುವ ಕಬ್ಬಿನ ಉತ್ಪಾದನೆ ಬೆಳೆಸುವ ರೀತಿ ಮತ್ತು ವಿಧಾನಗಳನ್ನು ಅಭಿವೃದ್ಧಿಪಡಿಸುವುದು.