ದೃಷ್ಟಿ ಕಾರ್ಯಾಚರಣೆ
ಸಂಸ್ಥೆಯ ಗುರಿಗಳು:
ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ.ಸಿಐ.193:ಎಸ್‍ಜಿಎಫ್:94(ಭಾ), ದಿನಾಂಕ 08.10.2003 ರ ಮೇರೆಗೆ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಮುಖ್ಯ ಕಛೇರಿಯನ್ನು ಬೆಳಗಾವಿಯಲ್ಲಿ ಹಾಗೂ ಅದರ ಉಪಕೇಂದ್ರವನ್ನು ಮಂಡ್ಯದಲ್ಲಿ ಸ್ಥಾಪಿಸಲಾಗಿತ್ತು. ನಂತರ ಸರ್ಕಾರದ ಆದೇಶ ಸಂಖ್ಯೆ. ಸಿಐ.50.ಎಸ್‍ಜಿಎಫ್.2010 ದಿನಾಂಕ: 22.01.2011 ರನ್ವಯ ರಾಜ್ಯದ ದಕ್ಷಿಣ ಭಾಗದಲ್ಲಿನ ರೈತ ಸಮೂದಾಯದ ಆಶೋತ್ತರಗಳಿಗೆ ಸ್ಪಂದಿಸಿ ಹೆಚ್ಚಿನ ಇಳುವರಿ ಹಾಗೂ ಸಕ್ಕರೆ ಅಂಶ ಹೊಂದಿರುವ ಕಬ್ಬಿನ ತಳಿಗಳನ್ನು ಬೆಳೆಯಲು ನೆರವಾಗಲು ಮತ್ತು ಕಬ್ಬು ಬೆಳೆಗೆ ಸಂಬಂಧಿತ ಸಂಶೋಧನೆಗಳನ್ನು ಕೈಕೊಳ್ಳಲು ಮಂಡ್ಯದ ವಿ.ಸಿ. ಕ್ಷೇತ್ರದಲ್ಲಿ ಪ್ರತ್ಯೇಕವಾಗಿ ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಕಬ್ಬು ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.
ದೃಷ್ಟಿ ವಾಕ್ಯ
ರಾಜ್ಯದ ಕಬ್ಬು ಬೆಳೆಗಾರರ ಸಮೃದ್ಧಿ ಹಾಗೂ ಸಕ್ಕರೆ ಉದ್ದಿಮೆಯ ತಾಂತ್ರಿಕತೆಯನ್ನು ಅಭಿವೃದ್ಧಿಪಡಿಸುವುದು.
ಧ್ಯೇಯ ವಾಕ್ಯ
ಕಬ್ಬಿನ ಇಳುವರಿ ಮತ್ತು ಲಾಭವನ್ನು ಹೆಚ್ಚಿಸಲು ಕಬ್ಬು ಬೆಳೆಗಾರರಿಗೆ ಯೋಗ್ಯ ತಳಿಗಳು, ತಾಂತ್ರಿಕತೆ, ಸೇವೆಗಳು ಹಾಗೂ ತರಬೇತಿ ಸೌಲಭ್ಯಗಳನ್ನು ಪೂರೈಸುವುದು.
ಸಕ್ಕರೆ ಕಾರ್ಖಾನೆಗಳ ಸಾಮಥ್ರ್ಯ ಹಾಗೂ ಲಾಭಾಂಶವನ್ನು ಹೆಚ್ಚಿಸುವ ಸಲುವಾಗಿ ಕಾರ್ಮಿಕರಿಗೆ ಸೂಕ್ತ ತರಬೇತಿ ನೀಡುವುದು ಹಾಗೂ ತಾಂತ್ರಿಕ ಸೇವೆಗಳನ್ನು ಪೂರೈಸುವುದು.